ಸಣ್ಣ ವಯಸ್ಸಿನಲ್ಲಿ ದೀಪಾವಳಿ ಅಂದ್ರೆ ಬರೀ ಪಟಾಕಿ ಹೊಡಿಯೋದೇ ಕೆಲಸ ಅಂದ್ಕೊಂಡಿದ್ದೆ ನಾನು .ಇನ್ಫ್ಯಾಕ್ಟ್ , ಈಗ್ಲೂ ಅದೇ ಮೈಂಡ್ ಸೆಟ್ ಆದ್ರೆ ಹಣತೆಗಳು ಮನೆಯೊಳಗೆ ಹೆಚ್ಚು . ವರ್ಷಗಳು ಕಳೆದರೂ ಹೀಗೆ ಇರಲಿ ಅಂತ ನನ್ನ ಆಸೆ. ಪಟಾಕಿ ತರೋದೇ ಕಾಯ್ತಾ ಇರ್ತಾಯಿದ್ದೆ . . ಮೂರು ದಿನಕ್ಕೆ ಆಗೋಷ್ಟು ಪಟಾಕಿಯನ್ನ ಭಾಗ ಮಾಡೋದ್ರಲ್ಲಿ ಅದೇನ್ ಸಂಭ್ರಮಾನೋ ಕಾಣೆ . ಆಟಂ ಬಾಂಬ್ನ ತೆಂಗಿನ ಕರಟದ ಅಡಿಯಲ್ಲಿ ,ಖಾಲಿ ಡಬ್ಬದೊಳಗೆ ಇಟ್ಟು ಡಬ್ಬ ಹಾರೋದನ್ನ ನೋಡಿ ನಾನು ಯಗರ್ಲಾಡ್ತಾ ಇದ್ದೆ . ಎಷ್ಟೇ ಪಟಾಕಿ ಇದ್ರೂ ಅರ್ಧ ಘಂಟೆಗೆ ಖಾಲಿ . ಸ್ವಲ್ಪ ಬುದ್ದಿ ಬಂದ್ಮೇಲೆ , ಆನೆ ಪಟಾಕಿನೇ ಜಾಸ್ತಿ .ಯಾಕ್ ಹೇಳಿ ? ದಿನವಿಡೀ ಹೊಡಿಬೊಹುದು ಅಂತ. ಬೆಳಿಗ್ಗೆ ,ಮದ್ಯಾಹ್ನ ,ಸಂಜೆ ಹೊಡ್ಡಿದ್ದೇ ಹೊಡ್ಡಿದ್ದು .ಸಂಜೆ ಅಮ್ಮ ದೀಪ ಹಚ್ಚೋದೇ ತಡ , ನಾನ್ ಫುಲ್ ರೆಡಿ . ಉದುದ್ದ ಅಗರ್ಬತ್ತಿ ತರಕ್ಕೆ ಅಂಗಡಿಗೆ ಆಗಾಗ ಹೋಗೋದ್ಬೇರೆ ಒಂದ್ ಕೆಲಸ . ಗನ್ ಇಲ್ದೆ ಇದ್ರೂ ರೀಲ್ನ ಕಲ್ಲಲ್ಲಿ ಕುಟ್ಟಿ ಡಮ್ ಅನ್ಸಿ ಕೈಗೆ ಕಿಡಿ ಹಾರಿಸ್ಕೊಂಡು ಬೈಸ್ಕೊಳದು ಥ್ರೀ ಡೇಸ್ ರೊಟೀನ್ . ಮಧ್ಯ ಏನಾದ್ರೂ ಮಳೆ ಬಂದ್ರೆ ಪ್ಲಾನೆಲ್ಲ ಠುಸ್ . ಪಟಾಕಿ ,ಛಳಿಗೆ ಹಾಳಾಗತ್ತೆನೋ ಅನ್ನೊ ಭಯಕ್ಕೆ ಬಟ್ಟೇಲಿ ಸುತ್ತಿಡೋದು ಬೇರೆ. " ತುಳಸಿ ಹಬ್ಬಕ್ಕೆ ಸಲ್ಪ ಎತ್ತಿಡೇ ", ಅನ್ನೋರು ಅಮ್ಮ .ಬರೀ ಹೂ ಅಂತಿದ್ದೆ . ಬೇಗ ಪಟಾಕಿ ಹೊಡೆದು ಲೇಟಾಗಿ ಹೊಡಿಯೋರ್ನ, ಮಾಡಿ ಮೇಲೆ ನಿಂತು ನೋಡೊದು ಊಟದ ನಂತರದ ಕೆಲಸ ನಂಗೆ. ಮಾರನೆ ದಿನ ಬೆಳಿಗ್ಗೆ ಸ್ನಾನಕ್ಕೆ ಮುಂಚೆ ರಾತ್ರಿ ಯಾವದಾದ್ರು ಪಟಾಕಿ ಉರಿದಲೆ ಹಾಗೆ ಬಿದ್ದಿದ್ಯೇನೊ ಅಂತ ಕಡ್ಡಿಲಿ ಕೆದುಕ್ತಾ ಇದ್ದೆ. ಕೊನೆಗೆ ಪೇಪರ್ನೆಲ್ಲಾ ಕೂಡಿಹಾಕಿ ಬೆಂಕಿ ಹಚ್ತಾಯಿದ್ದೆ. ಅಕಸ್ಮಾತಾಗಿ ಎಲ್ಲೊ ಡಮ್ ಅಂದ್ರೆ ಪಟಾಕಿ ಹೊಡೆದಷ್ಟೇ ಖುಷಿ .ಮಜಾ ಏನೂ೦ದ್ರೆ , ಕೆಲವು ಮಕ್ಕಳು ಕತ್ತಲೆ ಆಗೋಕ್ ಮುಂಚೆನೇ ಸುರ್ಸುರ್ ಬತ್ತಿ , ಫ್ಲವರ್ ಪಾಟ್ ಹಚ್ಚೋರು ಸ್ವಾಮಿ .. ನಗೋದೋ ? ಅಳೋದೋ ? ಆಗ ಸ್ಮಾರ್ಟ್ ಫೋನ್ ಇರ್ಲಿಲ್ಲ . ಲೈವ್ ಅನ್ನೋ ಪದಕ್ಕೆ ಲೈವ್ಲಿಯಾಗಿ ಎಂಜಾಯ್ ಮಾಡ್ತಾ ಇದ್ವಿ ... ಹಬ್ಬಕ್ಕೆ ಒಂದ್ ಕಳೆ ಇತ್ತು . ಈಗ್ಲೂ ಇದೆ ಬಟ್ ಕ್ಕ್ವಯ್ಟ್ ಡಿಫರೆಂಟ್ (ಅರ್ಥ ನೀವೇ ಹುಡುಕ್ಕೊಳಿ)........
April 19, 2017
Subscribe to:
Posts (Atom)