May 07, 2018

Tiruvu

ಎಷ್ಟೋ ವಿಷಯಗಳ ಬಗ್ಗೆ ಬರಿಬೇಕು ಅನ್ಸಿತ್ತು ಸುಮಾರು ದಿನಗಳಿಂದ . ಪೆನ್ನು ಹಿಡಿಯುತ್ತಿದಂತೆ ಆಲೋಚನೆಗಳು ಬೇರೆ ಬೇರೆ ವಿಷಯದತ್ತ ಎಗರಾಡೋಕೆ ಶುರು ಮಾಡ್ತು .ಯಾಕೋ ಕಾಣೆ ! ಇದಕ್ಕೆ ಅನ್ಸುತ್ತೆ ತಲೆ ನೆಟ್ಟಗೆ ನಿಲ್ಲಲ್ಲ ಅನ್ನೋದು . ಚಂಚಲ ಮನಸ್ಸಿನವರಿಗೆ ಇರೋ ಸಿಂಪ್ಟಮ್ !ಏನಪ್ಪಾ ಬರವಣಿಗೆನೇ  ಮರೆತುಬಿಟ್ನಾ ಅಂತ ಶುರುವಾಗ್ತಾ ಇದ್ದ ಹಾಗೆ ಪದಗಳ ಜೋಡಣೆ ತಾನಾಗೇ ಹಾಳೆಯ ಮೇಲೆ ಅಂಟಿತು . ಅಪ್ಪ ಸಧ್ಯ ! ಅಂದ್ಕೊಂಡೆ .
ಮನಸ್ಸು ಒಂದೇ ಅಲ್ಲ , ಬದುಕು ಕೂಡ ಚಂಚಲಾನೆ . ಎಲ್ಲವೂ ಅಂದುಕೊಂಡ ಹಾಗೆ ನಡಿತಾ ಬಂದ್ರೂ ಸಣ್ಣ ಪುಟ್ಟ ತಿರುವುಗಳಿಂದ ಕೊನೆಗೆ ಎಲ್ಲೊ ತಂದು ನಿಲ್ಲಿಸುತ್ತೆ. ಆ ಕೊನೆ ಏನೇ ಆಗಲಿ ,ಅದನ್ನು  ಅನುಭವಿಸುವ ಬದಲು ಪ್ರತಿಯೊಂದು ಕ್ಷಣವನ್ನು ಲಘುವಾಗಿ ತೆಗೆದುಕೊಂಡು ದೂಷಿಸುವವರೇ ಹೆಚ್ಚು . “life is short”, “ One life, live it” ,” life is beautiful”......ಅನ್ನೋ  ಮಾತುಗಳನ್ನು ಕೇವಲ ಖುಷಿಯ ದಿನಗಳಲ್ಲಿ ನಮೂದಿಸುವ ಬದಲು ಜೀವನದ ಎಲ್ಲಾ ತಿರುವುಗಳ್ಲಲಿ ಅಳವಡಿಸಿಕೊಂಡರೆ ಮಾತ್ರ ಬದುಕಿಗೊಂದು ಸಾರ್ಥಕತೆ . ಏಕೆಂದರೆ -
ನಾ ನೀನಲ್ಲ ,
ನೀ ನಾನಲ್ಲ ,
ಹಣೆಬರಹ ಒಂದಲ್ಲ ,
ಇರುವುದು ಕ್ಷಣಮಾತ್ರ ,
ದಿನಗಳು ನೆಪಮಾತ್ರ ,
ಬದುಕೆಂಬ ಪಾಠದಲಿ
ನಡವಳಿಕೆಯೇ ಕೋಲಾಟ .
-BMP