December 18, 2017

U-R-(IN-DIA)N


Cabin bag placed. Belt on. While I was gazing at the airplane book, a cute girl around 7-8 yrs of age smiled at me. I am good with kids you see.
She was accompanied by her parents. She came closer ,
Me with a smile back: What’s your name ?
She: Saina
She: What’s your name?
Me: Poornima
She: Are you a Muslim?
Me (In my mind: What!) and said No.
She: Are you a Hindu?
Me: No.
And she started staring with a doubtful smile.Thanking my humorous nature,
After 2 seconds, Me: I am an Indian.
Saina had nothing to say. With a little shy, she ran to her parents and started conversing in Urdu.
Keeping her religion aside,
Never a child questioned me about my religion. Why would she? Was she taught to do the same by her parents?
School? Or Influenced by something else? Or do I really look like one? Can’t blame anyone though. Moreover, blame game was not a solution.
This is not the question a child should be asking. Whatever, hope she gives a thought about my answer sometime since I could only teach her this at that span of time.
SOWING A SEED OF NATIONALITY IN  CHILD’S MIND IS A MUST BEFORE RELIGION.  Thank u Saina for making me realize !

December 01, 2017

ಕಿ - ಟ - key (Window)

ಕಿ - ಟ -  key :
ಬಸ್ಸಲ್ಲಿ ಕಿಟಕಿ ಪಕ್ಕ ಕೂರೋ  ಎಷ್ಟೋ ಮಂದಿ ಸಿಂಹಾಸನದ ಮೇಲೆ ಕೂತಿರೋರ್  ಥರ ಆಡ್ತಾರೆ ಕಣ್ರಿ . ಯಾವ ರೀತಿಯ ಅಡಚಣೆ  ಇರಲ್ಲ ಅಂತಾನೋ   ಅಥವ ಹೊರಗಿನ ಪ್ರಪಂಚವನ್ನ ಆರಾಮಾಗಿ  ನೋಡ್ಕೊಂಡು ಪ್ರಯಾಣ ಮಾಡಬಹುದು ಅನ್ನೊ  ಖುಷಿನೋ ಕಾಣೆ . ಕಾರಣ ಏನೇ ಇರಲಿ,ಜನರ ಮನಸ್ಸಲ್ಲಿ ಗೋಲ್ಡ್ ಕ್ಲಾಸ್ ಫೀಲಿಂಗ್ ಬರೋದಂತೂ ನಿಜ . ಎಲೆ ಅಡಿಕೆ ಉಗಿಯುವವರಿಗೆ ತಮ್ಮದೇ ಬಸ್ಸು ಅನ್ನೊ ವೈಭವ . ಕೆಲವರು ಫೋನ್ನಲ್ಲಿ ಡಿ .ಟಿ .ಯಸ್ ಎಫ್ಫೆಕ್ಟ್ ಕೊಟ್ಟು ಅರಿವಿಲ್ಲದಂತೆ ಕಿರ್ಚಾಡ್ತಾ ಇರ್ತಾರೆ. ಎಲ್ಲಾ ಕಿಟಕಿ ಮಹಿಮೆ. ಫ್ಲೈಟಲ್ಲೂ ವಿಂಡೋಸ್ ಸೀಟ್ ಫೆವರೇಟ್ .ಫೋಟೋ ಕ್ಲಿಕ್ಸಿದ್ದೋ ಕ್ಲಿಕ್ಸಿದ್ದೆ . ಪಕ್ಕದವ್ರು ಅಲ್ಲಾಡಕ್ಕೂ ಆಗ್ದೀರಾ ಪೇಚಾಡೋದನ್ನ ನೋಡಿ ಒಳಗೊಳಗೇ ಒಂಥರಾ ಖುಷಿ . ರೈಲುಗಳಲ್ಲಿ ಕಿಟಕಿಯಿಂದ ಕೊಂಡು ತಿನ್ನೋ ಸುಖ ಅನುಭವಿಸಿದವರಿಗೇ ಗೊತ್ತು. ಬರೀ ವಾಹನಗಳ ಬಗ್ಗೆನೆ ಮಾತಾಡ್ತಾ ಇದೀನಿ ಅಂದ್ಕೊಂಡ್ರಾ ? ಕ್ಲಾಸ್ಸ್ರೂಮ್ಗಳಲ್ಲಿ ಗಂಟೆಗಟ್ಟಲೆ ಬ್ಲಾಕ್ ಅಂಡ್ ವೈಟ್ ಬೋರ್ಡ್ ನೋಡೊ ಕಣ್ಣುಗಳಿಗೆ ಕಿಟಕಿನೇ ಎಂಟರ್ಟೈನ್ಮೆಂಟ್ .ಬೇರೆ ಜಗತ್ತೇ ಕೈಬೀಸಿ ಕರೆಯುತ್ತಿದೆ ಅನ್ಸುತ್ತೆ . ಕೆಲವೊಮ್ಮೆ ಹೊರಗೆ ನೋಡಿದ್ರೆ ಸಾಕು , ಉತ್ತರಗಳು ಹೊಳೆಯೋ ಚಾನ್ಸಸ್ ಜಾಸ್ತಿ.ಆಳವಾಗಿ ಹೋದ್ರೆ ಕಿಟಕಿಗಳಿಂದ ನೋಡಿದಾಗ  ಮನಸಿನ ಮೇಲೆ ಬೀಳೊ ಪರಿಣಾಮ ಹಾಗೇ ನೋಡಿದ್ರೆ ಸಿಗಲ್ಲ . ಸಿನಿಮಾಗಳಲ್ಲಿ ಭಾವನೆಗಳ್ಳನ್ನ ಕಿಟಕಿ ಪಕ್ಕ ನಿಂತು  ವ್ಯಕ್ತಪಡಿಸೋದೇ ಹೆಚ್ಚು.
' Windows makes you think ". ಭಾವನೆಗಳಿಗೂ ಕಿಟಕಿಗೂ ಏನೋ ಲಿಂಕ್ ಇರಬೇಕು. ಅದಕ್ಕೆ ನೋಡಿ ,ಸಣ್ಣ  ವಯಸ್ನಲ್ಲಿ ಪಟಾಕಿ ಸಿಡಿಯೋದನ್ನ , ಬೀದಿ ಮೆರವಣಿಗೆಯನ್ನ ,ಆಟಾಸಾಮಾನು , ಮಿಠಾಯಿ ಮಾರೋರನ್ನ ಕಿಟಕಿಯಿಂದ ನೋಡಿದ ಆ ದಿನಗಳನ್ನು  ಮತ್ತೆ  ಮೆಲುಕು ಹಾಕುವಂತೆ ಮಾಡುತ್ತೆ ನೆನೆಪುಗಳು . ಕುಂಟೆಬಿಲ್ಲೆ ಕಾಲದಿಂದ  ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ವರೆಗೂ ಒಂದೇ ಫ್ರೇಮ್ನಲ್ಲಿ  ಇಡೀ ಪ್ರಪಂಚಾನೇ ತೋರಿಸೋ ಈ ಕಿಟಕಿದೇ ಕಿಮ್ಮತ್ತು . 

-ಬಿ .ಎಂ .ಪಿ