November 30, 2017

ಒಸಿ ಯೋಳ್ತಿನ್ ಕೇಳಿ


ಬೆಂಗ್ಳೂರ್ ಬಗ್ಗೆ ಸುಮ್ ಸುಮ್ನೆ ಟ್ರಾಫಿಕ್ಕು , ನೀರಿನ್ ಸಮಸ್ಯೆ ,ಪೊಲ್ಲ್ಯೂಷನ್ನು ಮಣ್ಣು ಮಸಿ ಅಂತ ಕಂಪ್ಲೇಂಟ್ ಮಾಡ್ಡೋರ್ ,ಹೊರ ರಾಜ್ಯ ಅಥವಾ ಬೇರೆ ಊರಿಂದ್ ದುಡಿಯಾಕ್ ಬಂದು ಇಲ್ಲೇ ಸೆಟ್ಲ್ ಆಗಿ ಬೆಂಗಳೂರ್ ಅಂದ್ರೆ ಬರೀ ಫ್ಹ್ಯಶನ್ ಅಂದ್ಕೊಂಡಿರೋ ನನ್ *** ಎಲ್ಲಾ ಕಿವಿ ಕೊಟ್ ಕೇಳ್ರಿ .. ಬರೀ ಮಾಲು ,ಮೋಜು ,ವೀಕೆಂಡ್ ಡ್ರೈವು ,ಡಿನ್ನರ್ ,ಡೇಟಿಂಗ್ ಐಟಿಬಿಟಿ ಅಷ್ಟೇ ಅಂದ್ಕೊಂಡ್ರಾ ಅಣ್ತಮ್ಮಾಸ್ ? ಈ ಊರ್ ಅಂದ್ರೆ ಏನ್ ಸುಮ್ನೇನಾ ?
ಬೆಂಗ್ಳೂರ್ನ ಉಪಯೋಗ್ಸ್ಕೊಳೋ ರೀತಿ ಇಲ್ಲೇ ಹುಟ್ಟಿ ಬೆಳ್ದಿರೋ ಎಷ್ಟೋ ಮಂದಿಗ್ ಇನ್ನೂ ಗೊತ್ತಿಲ್ಲ .ಪ್ರತೀ ವಾರ ಇನ್ನೂ ಯಾಕೆ ಕಣ್ಣ್ ಬಿಟ್ ನೋಡಿದ್ರೆ ಪ್ರತೀ ದಿನಾ ಇಲ್ಲಿ  ಸಾಹಿತ್ಯ , ಸಂಸ್ಕೃತಿ ಬಗ್ಗೆ ನಡಿಯೋ ಕಾರ್ಯಕ್ರಮಗಳು ನನ್ ಮಗಂದ್ ಬೇರೆ ಯಾವ್ ಜಿಲ್ಲೆಲ್ಲೂ ಇಷ್ಟೊಂದ್  ನಾನ್  ಕಾಣ್ ವೊಲ್ಲೆ . ಕಥೆ ,ಕಾದಂಬರಿ , ನಾಟಕ ,ಕ್ರೀಡೆ ,ಸಂಗೀತ ,ನೃತ್ಯ ,ಅಡಿಗೆ .....ಅಬ್ಬಬ್ಬಾ ಯಾವ್ದ್  ಬೇಕೋ ಆಯ್ಕೊಳಿ . ಒಂದೊಂದ್ ವಿಷ್ಯದ್ ಬಗ್ಗೆ ನಡಿಯೋ ಕಾರ್ಯಕ್ರಮಗಳಲ್ಲೂ ನಮ್ಮೂರೇ ಎತ್ತಿದ್ ಕೈ . ಇದನೆಲ್ಲಾ ಉಳಿಸಿ ಬೆಳಿಸ್ತಾ ಇರೋದು ಹೆಚ್ಚಾಗಿ ಬಡ್ಡಿಮಗಂದ್ ಬೆಂಗ್ಳೂರ್ ಕನ್ರಲ್ಲಾ ..... ನನ್ ದೋಸ್ತಿಸ್ ಎಷ್ಟೋ ಮಂದಿ ಈ ಊರಿನ್ ವೆದರ್ಗೆ ಬಿದ್ದೋಗವ್ರೆ . ಫೈನಲ್ಆಗ್ ಯೋಳ್ತಿವ್ನಿ , ಕಂಪ್ಲೇಂಟ್  ಮಾಡೋದ್ನ ಪಕ್ಕಕ್  ವಗಾಸಿ. ಯೂಸ್ ಮಾಡ್ಕೊಳಿ ನೆಟ್ಟಿಗೆ. ಆಗ್ಲಿಲ್ಲ ಅಂದ್ರೆ ವಾಪಸ್ ಹೋಗಾಕ್ ದಾರಿ ಗೊತ್ತಲ್ಲ ?ಈ ಊರೇ ಒಂದ್ ಗಿಫ್ಟ್ .  ...ಬಿಕಾಸ್ ಬಾಂಗ್ಳೂರ್ ಇಸ್ ಹೆವನ್ . ಅಷ್ಟಿಲ್ದೀರಾ ಠಿಕಾಣಿ ಹಾಕ್ತಿದ್ರಾ ಇಲ್ಲಿ? ನಮ್ ಮನೆ ದೇವ್ರಾಣೆ ಇಂಗ್ಲಿಷ್ಅಲ್  ಇದ್ನ ಭಾಷಾಂತ್ರ ಮಾಡಲ್ಲ . ಕನ್ನಡ ಕಲಿರ್ಲಾ ..... 
ಮಳೆ ನೋಡಿ ನಿನ್ನೆ ಇಂದ , ಅದಕ್ಕೆ ಕಾಲಿಗ್ ಪುರ್ಸೊತ್ ಕೊಟ್ಟು ಪೆನ್ ಹಿಡ್ದೆ . ಆಡು ಭಾಷೇಲಿ ಗೀಚ್ತಾ ಬಿಸಿ ಬಿಸಿ ಟೀ ಪುಟ್ಕೊತಾ ಬರ್ಯೋ ಮಜಾನೇ ಬೇರೆ . ಹೇಳೋದ್ ಮರ್ತಿದ್ದೆ .ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ರೆ ಕ್ಷಮಿಸ್ಬೇಡಿ .ಸಿಕ್ದಾಗ್  ಉಗಿರಿ ಪರ್ವಾಗಿಲ್ಲ.