December 18, 2017

U-R-(IN-DIA)N


Cabin bag placed. Belt on. While I was gazing at the airplane book, a cute girl around 7-8 yrs of age smiled at me. I am good with kids you see.
She was accompanied by her parents. She came closer ,
Me with a smile back: What’s your name ?
She: Saina
She: What’s your name?
Me: Poornima
She: Are you a Muslim?
Me (In my mind: What!) and said No.
She: Are you a Hindu?
Me: No.
And she started staring with a doubtful smile.Thanking my humorous nature,
After 2 seconds, Me: I am an Indian.
Saina had nothing to say. With a little shy, she ran to her parents and started conversing in Urdu.
Keeping her religion aside,
Never a child questioned me about my religion. Why would she? Was she taught to do the same by her parents?
School? Or Influenced by something else? Or do I really look like one? Can’t blame anyone though. Moreover, blame game was not a solution.
This is not the question a child should be asking. Whatever, hope she gives a thought about my answer sometime since I could only teach her this at that span of time.
SOWING A SEED OF NATIONALITY IN  CHILD’S MIND IS A MUST BEFORE RELIGION.  Thank u Saina for making me realize !

December 01, 2017

ಕಿ - ಟ - key (Window)

ಕಿ - ಟ -  key :
ಬಸ್ಸಲ್ಲಿ ಕಿಟಕಿ ಪಕ್ಕ ಕೂರೋ  ಎಷ್ಟೋ ಮಂದಿ ಸಿಂಹಾಸನದ ಮೇಲೆ ಕೂತಿರೋರ್  ಥರ ಆಡ್ತಾರೆ ಕಣ್ರಿ . ಯಾವ ರೀತಿಯ ಅಡಚಣೆ  ಇರಲ್ಲ ಅಂತಾನೋ   ಅಥವ ಹೊರಗಿನ ಪ್ರಪಂಚವನ್ನ ಆರಾಮಾಗಿ  ನೋಡ್ಕೊಂಡು ಪ್ರಯಾಣ ಮಾಡಬಹುದು ಅನ್ನೊ  ಖುಷಿನೋ ಕಾಣೆ . ಕಾರಣ ಏನೇ ಇರಲಿ,ಜನರ ಮನಸ್ಸಲ್ಲಿ ಗೋಲ್ಡ್ ಕ್ಲಾಸ್ ಫೀಲಿಂಗ್ ಬರೋದಂತೂ ನಿಜ . ಎಲೆ ಅಡಿಕೆ ಉಗಿಯುವವರಿಗೆ ತಮ್ಮದೇ ಬಸ್ಸು ಅನ್ನೊ ವೈಭವ . ಕೆಲವರು ಫೋನ್ನಲ್ಲಿ ಡಿ .ಟಿ .ಯಸ್ ಎಫ್ಫೆಕ್ಟ್ ಕೊಟ್ಟು ಅರಿವಿಲ್ಲದಂತೆ ಕಿರ್ಚಾಡ್ತಾ ಇರ್ತಾರೆ. ಎಲ್ಲಾ ಕಿಟಕಿ ಮಹಿಮೆ. ಫ್ಲೈಟಲ್ಲೂ ವಿಂಡೋಸ್ ಸೀಟ್ ಫೆವರೇಟ್ .ಫೋಟೋ ಕ್ಲಿಕ್ಸಿದ್ದೋ ಕ್ಲಿಕ್ಸಿದ್ದೆ . ಪಕ್ಕದವ್ರು ಅಲ್ಲಾಡಕ್ಕೂ ಆಗ್ದೀರಾ ಪೇಚಾಡೋದನ್ನ ನೋಡಿ ಒಳಗೊಳಗೇ ಒಂಥರಾ ಖುಷಿ . ರೈಲುಗಳಲ್ಲಿ ಕಿಟಕಿಯಿಂದ ಕೊಂಡು ತಿನ್ನೋ ಸುಖ ಅನುಭವಿಸಿದವರಿಗೇ ಗೊತ್ತು. ಬರೀ ವಾಹನಗಳ ಬಗ್ಗೆನೆ ಮಾತಾಡ್ತಾ ಇದೀನಿ ಅಂದ್ಕೊಂಡ್ರಾ ? ಕ್ಲಾಸ್ಸ್ರೂಮ್ಗಳಲ್ಲಿ ಗಂಟೆಗಟ್ಟಲೆ ಬ್ಲಾಕ್ ಅಂಡ್ ವೈಟ್ ಬೋರ್ಡ್ ನೋಡೊ ಕಣ್ಣುಗಳಿಗೆ ಕಿಟಕಿನೇ ಎಂಟರ್ಟೈನ್ಮೆಂಟ್ .ಬೇರೆ ಜಗತ್ತೇ ಕೈಬೀಸಿ ಕರೆಯುತ್ತಿದೆ ಅನ್ಸುತ್ತೆ . ಕೆಲವೊಮ್ಮೆ ಹೊರಗೆ ನೋಡಿದ್ರೆ ಸಾಕು , ಉತ್ತರಗಳು ಹೊಳೆಯೋ ಚಾನ್ಸಸ್ ಜಾಸ್ತಿ.ಆಳವಾಗಿ ಹೋದ್ರೆ ಕಿಟಕಿಗಳಿಂದ ನೋಡಿದಾಗ  ಮನಸಿನ ಮೇಲೆ ಬೀಳೊ ಪರಿಣಾಮ ಹಾಗೇ ನೋಡಿದ್ರೆ ಸಿಗಲ್ಲ . ಸಿನಿಮಾಗಳಲ್ಲಿ ಭಾವನೆಗಳ್ಳನ್ನ ಕಿಟಕಿ ಪಕ್ಕ ನಿಂತು  ವ್ಯಕ್ತಪಡಿಸೋದೇ ಹೆಚ್ಚು.
' Windows makes you think ". ಭಾವನೆಗಳಿಗೂ ಕಿಟಕಿಗೂ ಏನೋ ಲಿಂಕ್ ಇರಬೇಕು. ಅದಕ್ಕೆ ನೋಡಿ ,ಸಣ್ಣ  ವಯಸ್ನಲ್ಲಿ ಪಟಾಕಿ ಸಿಡಿಯೋದನ್ನ , ಬೀದಿ ಮೆರವಣಿಗೆಯನ್ನ ,ಆಟಾಸಾಮಾನು , ಮಿಠಾಯಿ ಮಾರೋರನ್ನ ಕಿಟಕಿಯಿಂದ ನೋಡಿದ ಆ ದಿನಗಳನ್ನು  ಮತ್ತೆ  ಮೆಲುಕು ಹಾಕುವಂತೆ ಮಾಡುತ್ತೆ ನೆನೆಪುಗಳು . ಕುಂಟೆಬಿಲ್ಲೆ ಕಾಲದಿಂದ  ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ವರೆಗೂ ಒಂದೇ ಫ್ರೇಮ್ನಲ್ಲಿ  ಇಡೀ ಪ್ರಪಂಚಾನೇ ತೋರಿಸೋ ಈ ಕಿಟಕಿದೇ ಕಿಮ್ಮತ್ತು . 

-ಬಿ .ಎಂ .ಪಿ

November 30, 2017

ಒಸಿ ಯೋಳ್ತಿನ್ ಕೇಳಿ


ಬೆಂಗ್ಳೂರ್ ಬಗ್ಗೆ ಸುಮ್ ಸುಮ್ನೆ ಟ್ರಾಫಿಕ್ಕು , ನೀರಿನ್ ಸಮಸ್ಯೆ ,ಪೊಲ್ಲ್ಯೂಷನ್ನು ಮಣ್ಣು ಮಸಿ ಅಂತ ಕಂಪ್ಲೇಂಟ್ ಮಾಡ್ಡೋರ್ ,ಹೊರ ರಾಜ್ಯ ಅಥವಾ ಬೇರೆ ಊರಿಂದ್ ದುಡಿಯಾಕ್ ಬಂದು ಇಲ್ಲೇ ಸೆಟ್ಲ್ ಆಗಿ ಬೆಂಗಳೂರ್ ಅಂದ್ರೆ ಬರೀ ಫ್ಹ್ಯಶನ್ ಅಂದ್ಕೊಂಡಿರೋ ನನ್ *** ಎಲ್ಲಾ ಕಿವಿ ಕೊಟ್ ಕೇಳ್ರಿ .. ಬರೀ ಮಾಲು ,ಮೋಜು ,ವೀಕೆಂಡ್ ಡ್ರೈವು ,ಡಿನ್ನರ್ ,ಡೇಟಿಂಗ್ ಐಟಿಬಿಟಿ ಅಷ್ಟೇ ಅಂದ್ಕೊಂಡ್ರಾ ಅಣ್ತಮ್ಮಾಸ್ ? ಈ ಊರ್ ಅಂದ್ರೆ ಏನ್ ಸುಮ್ನೇನಾ ?
ಬೆಂಗ್ಳೂರ್ನ ಉಪಯೋಗ್ಸ್ಕೊಳೋ ರೀತಿ ಇಲ್ಲೇ ಹುಟ್ಟಿ ಬೆಳ್ದಿರೋ ಎಷ್ಟೋ ಮಂದಿಗ್ ಇನ್ನೂ ಗೊತ್ತಿಲ್ಲ .ಪ್ರತೀ ವಾರ ಇನ್ನೂ ಯಾಕೆ ಕಣ್ಣ್ ಬಿಟ್ ನೋಡಿದ್ರೆ ಪ್ರತೀ ದಿನಾ ಇಲ್ಲಿ  ಸಾಹಿತ್ಯ , ಸಂಸ್ಕೃತಿ ಬಗ್ಗೆ ನಡಿಯೋ ಕಾರ್ಯಕ್ರಮಗಳು ನನ್ ಮಗಂದ್ ಬೇರೆ ಯಾವ್ ಜಿಲ್ಲೆಲ್ಲೂ ಇಷ್ಟೊಂದ್  ನಾನ್  ಕಾಣ್ ವೊಲ್ಲೆ . ಕಥೆ ,ಕಾದಂಬರಿ , ನಾಟಕ ,ಕ್ರೀಡೆ ,ಸಂಗೀತ ,ನೃತ್ಯ ,ಅಡಿಗೆ .....ಅಬ್ಬಬ್ಬಾ ಯಾವ್ದ್  ಬೇಕೋ ಆಯ್ಕೊಳಿ . ಒಂದೊಂದ್ ವಿಷ್ಯದ್ ಬಗ್ಗೆ ನಡಿಯೋ ಕಾರ್ಯಕ್ರಮಗಳಲ್ಲೂ ನಮ್ಮೂರೇ ಎತ್ತಿದ್ ಕೈ . ಇದನೆಲ್ಲಾ ಉಳಿಸಿ ಬೆಳಿಸ್ತಾ ಇರೋದು ಹೆಚ್ಚಾಗಿ ಬಡ್ಡಿಮಗಂದ್ ಬೆಂಗ್ಳೂರ್ ಕನ್ರಲ್ಲಾ ..... ನನ್ ದೋಸ್ತಿಸ್ ಎಷ್ಟೋ ಮಂದಿ ಈ ಊರಿನ್ ವೆದರ್ಗೆ ಬಿದ್ದೋಗವ್ರೆ . ಫೈನಲ್ಆಗ್ ಯೋಳ್ತಿವ್ನಿ , ಕಂಪ್ಲೇಂಟ್  ಮಾಡೋದ್ನ ಪಕ್ಕಕ್  ವಗಾಸಿ. ಯೂಸ್ ಮಾಡ್ಕೊಳಿ ನೆಟ್ಟಿಗೆ. ಆಗ್ಲಿಲ್ಲ ಅಂದ್ರೆ ವಾಪಸ್ ಹೋಗಾಕ್ ದಾರಿ ಗೊತ್ತಲ್ಲ ?ಈ ಊರೇ ಒಂದ್ ಗಿಫ್ಟ್ .  ...ಬಿಕಾಸ್ ಬಾಂಗ್ಳೂರ್ ಇಸ್ ಹೆವನ್ . ಅಷ್ಟಿಲ್ದೀರಾ ಠಿಕಾಣಿ ಹಾಕ್ತಿದ್ರಾ ಇಲ್ಲಿ? ನಮ್ ಮನೆ ದೇವ್ರಾಣೆ ಇಂಗ್ಲಿಷ್ಅಲ್  ಇದ್ನ ಭಾಷಾಂತ್ರ ಮಾಡಲ್ಲ . ಕನ್ನಡ ಕಲಿರ್ಲಾ ..... 
ಮಳೆ ನೋಡಿ ನಿನ್ನೆ ಇಂದ , ಅದಕ್ಕೆ ಕಾಲಿಗ್ ಪುರ್ಸೊತ್ ಕೊಟ್ಟು ಪೆನ್ ಹಿಡ್ದೆ . ಆಡು ಭಾಷೇಲಿ ಗೀಚ್ತಾ ಬಿಸಿ ಬಿಸಿ ಟೀ ಪುಟ್ಕೊತಾ ಬರ್ಯೋ ಮಜಾನೇ ಬೇರೆ . ಹೇಳೋದ್ ಮರ್ತಿದ್ದೆ .ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ರೆ ಕ್ಷಮಿಸ್ಬೇಡಿ .ಸಿಕ್ದಾಗ್  ಉಗಿರಿ ಪರ್ವಾಗಿಲ್ಲ.

May 04, 2017

Flying Wheel

I dreamt of touching the sky since my childhood. But I had the privilege to just wave my hands from the terrace to the Airplane thinking travelers would notice me. As a child that was a happy 30 sec shift of mind since eyes would concentrate only on that tiny little flying object dreaming of the scenarios that would happen inside the aircraft.
I recollect this every time I touch Airport road in Bangalore .Thoughts awake my mind against  the daily routines. 40 min of journey from my home to BIA could be added as my everlasting life time memory.I would have already educated myself  a hell lot about the place prior my visit.The history ,heritage ,culture,food,local lifestyle,de tours and what not ! Every detailed component about the destination would plug over my mind questioning “Will it be the same in real “? Gazing at people passing by in cars beside me fires my zeal.I hate tourists.”Is he a tourist or a traveller ? “ I can easily differentiate by looking at someone who is on an urge  to travel. This queries my mind till I board my flight.The moment I’m taken off, the wonderful circle completes when I look below from the window waiting for that little child somewhere to wave her hand towards me and a tiny bird within me tweets inside :

“Always hold your head high and dream but once you are there, be down to earth "!

April 19, 2017

DeepavaLi(ದೀಪಾವಳಿ)

ಸಣ್ಣ ವಯಸ್ಸಿನಲ್ಲಿ ದೀಪಾವಳಿ ಅಂದ್ರೆ ಬರೀ ಪಟಾಕಿ ಹೊಡಿಯೋದೇ ಕೆಲಸ ಅಂದ್ಕೊಂಡಿದ್ದೆ ನಾನು .ಇನ್ಫ್ಯಾಕ್ಟ್ , ಈಗ್ಲೂ ಅದೇ ಮೈಂಡ್ ಸೆಟ್ ಆದ್ರೆ ಹಣತೆಗಳು ಮನೆಯೊಳಗೆ ಹೆಚ್ಚು .  ವರ್ಷಗಳು ಕಳೆದರೂ ಹೀಗೆ ಇರಲಿ ಅಂತ ನನ್ನ ಆಸೆ. ಪಟಾಕಿ ತರೋದೇ ಕಾಯ್ತಾ  ಇರ್ತಾಯಿದ್ದೆ .  .  ಮೂರು ದಿನಕ್ಕೆ ಆಗೋಷ್ಟು ಪಟಾಕಿಯನ್ನ ಭಾಗ ಮಾಡೋದ್ರಲ್ಲಿ  ಅದೇನ್ ಸಂಭ್ರಮಾನೋ ಕಾಣೆ . ಆಟಂ ಬಾಂಬ್ನ ತೆಂಗಿನ ಕರಟದ ಅಡಿಯಲ್ಲಿ ,ಖಾಲಿ ಡಬ್ಬದೊಳಗೆ ಇಟ್ಟು ಡಬ್ಬ ಹಾರೋದನ್ನ ನೋಡಿ ನಾನು ಯಗರ್ಲಾಡ್ತಾ  ಇದ್ದೆ . ಎಷ್ಟೇ ಪಟಾಕಿ ಇದ್ರೂ ಅರ್ಧ ಘಂಟೆಗೆ ಖಾಲಿ . ಸ್ವಲ್ಪ ಬುದ್ದಿ ಬಂದ್ಮೇಲೆ , ಆನೆ ಪಟಾಕಿನೇ ಜಾಸ್ತಿ .ಯಾಕ್ ಹೇಳಿ ? ದಿನವಿಡೀ ಹೊಡಿಬೊಹುದು ಅಂತ. ಬೆಳಿಗ್ಗೆ ,ಮದ್ಯಾಹ್ನ ,ಸಂಜೆ ಹೊಡ್ಡಿದ್ದೇ ಹೊಡ್ಡಿದ್ದು .ಸಂಜೆ ಅಮ್ಮ ದೀಪ ಹಚ್ಚೋದೇ  ತಡ , ನಾನ್ ಫುಲ್ ರೆಡಿ . ಉದುದ್ದ ಅಗರ್ಬತ್ತಿ ತರಕ್ಕೆ ಅಂಗಡಿಗೆ ಆಗಾಗ ಹೋಗೋದ್ಬೇರೆ ಒಂದ್ ಕೆಲಸ . ಗನ್ ಇಲ್ದೆ ಇದ್ರೂ ರೀಲ್ನ ಕಲ್ಲಲ್ಲಿ ಕುಟ್ಟಿ ಡಮ್ ಅನ್ಸಿ ಕೈಗೆ ಕಿಡಿ ಹಾರಿಸ್ಕೊಂಡು ಬೈಸ್ಕೊಳದು ಥ್ರೀ ಡೇಸ್ ರೊಟೀನ್ .  ಮಧ್ಯ ಏನಾದ್ರೂ ಮಳೆ ಬಂದ್ರೆ ಪ್ಲಾನೆಲ್ಲ ಠುಸ್ . ಪಟಾಕಿ ,ಛಳಿಗೆ ಹಾಳಾಗತ್ತೆನೋ ಅನ್ನೊ ಭಯಕ್ಕೆ ಬಟ್ಟೇಲಿ ಸುತ್ತಿಡೋದು ಬೇರೆ. " ತುಳಸಿ ಹಬ್ಬಕ್ಕೆ ಸಲ್ಪ ಎತ್ತಿಡೇ ", ಅನ್ನೋರು ಅಮ್ಮ .ಬರೀ ಹೂ ಅಂತಿದ್ದೆ . ಬೇಗ ಪಟಾಕಿ ಹೊಡೆದು ಲೇಟಾಗಿ ಹೊಡಿಯೋರ್ನ, ಮಾಡಿ ಮೇಲೆ ನಿಂತು ನೋಡೊದು ಊಟದ ನಂತರದ ಕೆಲಸ ನಂಗೆ. ಮಾರನೆ ದಿನ ಬೆಳಿಗ್ಗೆ ಸ್ನಾನಕ್ಕೆ ಮುಂಚೆ ರಾತ್ರಿ ಯಾವದಾದ್ರು ಪಟಾಕಿ ಉರಿದಲೆ ಹಾಗೆ ಬಿದ್ದಿದ್ಯೇನೊ ಅಂತ ಕಡ್ಡಿಲಿ ಕೆದುಕ್ತಾ ಇದ್ದೆ. ಕೊನೆಗೆ ಪೇಪರ್ನೆಲ್ಲಾ  ಕೂಡಿಹಾಕಿ ಬೆಂಕಿ ಹಚ್ತಾಯಿದ್ದೆ.  ಅಕಸ್ಮಾತಾಗಿ ಎಲ್ಲೊ ಡಮ್ ಅಂದ್ರೆ ಪಟಾಕಿ ಹೊಡೆದಷ್ಟೇ ಖುಷಿ .ಮಜಾ ಏನೂ೦ದ್ರೆ , ಕೆಲವು ಮಕ್ಕಳು ಕತ್ತಲೆ ಆಗೋಕ್ ಮುಂಚೆನೇ ಸುರ್ಸುರ್ ಬತ್ತಿ , ಫ್ಲವರ್ ಪಾಟ್ ಹಚ್ಚೋರು ಸ್ವಾಮಿ .. ನಗೋದೋ ? ಅಳೋದೋ ? ಆಗ ಸ್ಮಾರ್ಟ್ ಫೋನ್ ಇರ್ಲಿಲ್ಲ . ಲೈವ್ ಅನ್ನೋ ಪದಕ್ಕೆ ಲೈವ್ಲಿಯಾಗಿ ಎಂಜಾಯ್ ಮಾಡ್ತಾ ಇದ್ವಿ ... ಹಬ್ಬಕ್ಕೆ ಒಂದ್ ಕಳೆ ಇತ್ತು . ಈಗ್ಲೂ ಇದೆ ಬಟ್ ಕ್ಕ್ವಯ್ಟ್ ಡಿಫರೆಂಟ್ (ಅರ್ಥ ನೀವೇ ಹುಡುಕ್ಕೊಳಿ)........