ಕಿ - ಟ - key :
ಬಸ್ಸಲ್ಲಿ ಕಿಟಕಿ ಪಕ್ಕ ಕೂರೋ ಎಷ್ಟೋ ಮಂದಿ ಸಿಂಹಾಸನದ ಮೇಲೆ ಕೂತಿರೋರ್ ಥರ ಆಡ್ತಾರೆ ಕಣ್ರಿ . ಯಾವ ರೀತಿಯ ಅಡಚಣೆ ಇರಲ್ಲ ಅಂತಾನೋ ಅಥವ ಹೊರಗಿನ ಪ್ರಪಂಚವನ್ನ ಆರಾಮಾಗಿ ನೋಡ್ಕೊಂಡು ಪ್ರಯಾಣ ಮಾಡಬಹುದು ಅನ್ನೊ ಖುಷಿನೋ ಕಾಣೆ . ಕಾರಣ ಏನೇ ಇರಲಿ,ಜನರ ಮನಸ್ಸಲ್ಲಿ ಗೋಲ್ಡ್ ಕ್ಲಾಸ್ ಫೀಲಿಂಗ್ ಬರೋದಂತೂ ನಿಜ . ಎಲೆ ಅಡಿಕೆ ಉಗಿಯುವವರಿಗೆ ತಮ್ಮದೇ ಬಸ್ಸು ಅನ್ನೊ ವೈಭವ . ಕೆಲವರು ಫೋನ್ನಲ್ಲಿ ಡಿ .ಟಿ .ಯಸ್ ಎಫ್ಫೆಕ್ಟ್ ಕೊಟ್ಟು ಅರಿವಿಲ್ಲದಂತೆ ಕಿರ್ಚಾಡ್ತಾ ಇರ್ತಾರೆ. ಎಲ್ಲಾ ಕಿಟಕಿ ಮಹಿಮೆ. ಫ್ಲೈಟಲ್ಲೂ ವಿಂಡೋಸ್ ಸೀಟ್ ಫೆವರೇಟ್ .ಫೋಟೋ ಕ್ಲಿಕ್ಸಿದ್ದೋ ಕ್ಲಿಕ್ಸಿದ್ದೆ . ಪಕ್ಕದವ್ರು ಅಲ್ಲಾಡಕ್ಕೂ ಆಗ್ದೀರಾ ಪೇಚಾಡೋದನ್ನ ನೋಡಿ ಒಳಗೊಳಗೇ ಒಂಥರಾ ಖುಷಿ . ರೈಲುಗಳಲ್ಲಿ ಕಿಟಕಿಯಿಂದ ಕೊಂಡು ತಿನ್ನೋ ಸುಖ ಅನುಭವಿಸಿದವರಿಗೇ ಗೊತ್ತು. ಬರೀ ವಾಹನಗಳ ಬಗ್ಗೆನೆ ಮಾತಾಡ್ತಾ ಇದೀನಿ ಅಂದ್ಕೊಂಡ್ರಾ ? ಕ್ಲಾಸ್ಸ್ರೂಮ್ಗಳಲ್ಲಿ ಗಂಟೆಗಟ್ಟಲೆ ಬ್ಲಾಕ್ ಅಂಡ್ ವೈಟ್ ಬೋರ್ಡ್ ನೋಡೊ ಕಣ್ಣುಗಳಿಗೆ ಕಿಟಕಿನೇ ಎಂಟರ್ಟೈನ್ಮೆಂಟ್ .ಬೇರೆ ಜಗತ್ತೇ ಕೈಬೀಸಿ ಕರೆಯುತ್ತಿದೆ ಅನ್ಸುತ್ತೆ . ಕೆಲವೊಮ್ಮೆ ಹೊರಗೆ ನೋಡಿದ್ರೆ ಸಾಕು , ಉತ್ತರಗಳು ಹೊಳೆಯೋ ಚಾನ್ಸಸ್ ಜಾಸ್ತಿ.ಆಳವಾಗಿ ಹೋದ್ರೆ ಕಿಟಕಿಗಳಿಂದ ನೋಡಿದಾಗ ಮನಸಿನ ಮೇಲೆ ಬೀಳೊ ಪರಿಣಾಮ ಹಾಗೇ ನೋಡಿದ್ರೆ ಸಿಗಲ್ಲ . ಸಿನಿಮಾಗಳಲ್ಲಿ ಭಾವನೆಗಳ್ಳನ್ನ ಕಿಟಕಿ ಪಕ್ಕ ನಿಂತು ವ್ಯಕ್ತಪಡಿಸೋದೇ ಹೆಚ್ಚು.
' Windows makes you think ". ಭಾವನೆಗಳಿಗೂ ಕಿಟಕಿಗೂ ಏನೋ ಲಿಂಕ್ ಇರಬೇಕು. ಅದಕ್ಕೆ ನೋಡಿ ,ಸಣ್ಣ ವಯಸ್ನಲ್ಲಿ ಪಟಾಕಿ ಸಿಡಿಯೋದನ್ನ , ಬೀದಿ ಮೆರವಣಿಗೆಯನ್ನ ,ಆಟಾಸಾಮಾನು , ಮಿಠಾಯಿ ಮಾರೋರನ್ನ ಕಿಟಕಿಯಿಂದ ನೋಡಿದ ಆ ದಿನಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡುತ್ತೆ ನೆನೆಪುಗಳು . ಕುಂಟೆಬಿಲ್ಲೆ ಕಾಲದಿಂದ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ವರೆಗೂ ಒಂದೇ ಫ್ರೇಮ್ನಲ್ಲಿ ಇಡೀ ಪ್ರಪಂಚಾನೇ ತೋರಿಸೋ ಈ ಕಿಟಕಿದೇ ಕಿಮ್ಮತ್ತು .
-ಬಿ .ಎಂ .ಪಿ
0 comments:
Post a Comment