December 17, 2018

Heege nodi nam jana ....

ಫಾರ್ ಏ ಚೇಂಜ್ ಬೆಳ್ಳಿಗೆ ಖಾಲಿ ಬಸ್ , ಕಂಡಕ್ಟರ್ ನನ್ ಪಕ್ಕ ಬಂದ್ ಕೂತ್ಕೊಂಡು .....
ಕಂಡಕ್ಟರ್:ಎಲ್ಲಿ ಮೇಡಂ ಕೆಲ್ಸ ?
ನಾನು :ನಿಮ್ಹಾನ್ಸ್ .
ಕಂಡಕ್ಟರ್:ಡಾಕ್ಟ್ರಾ ?
ನಾನು : ಅಲ್ಲ .
ಕಂಡಕ್ಟರ್.ಬಿ .ಎಸ್ ಸಿ ನಾ ?
ನಾನು : ಅಲ್ಲ . ಎಂ ಸಿ ಎ .
ಕಂಡಕ್ಟರ್:ಕಂಪ್ಯೂಟರ್ ಕೆಲ್ಸ ನಾ ?
ನಾನು : ಹು .
ಕಂಡಕ್ಟರ್:ಬೇಗ ಒಂದ್ ಮದ್ವೆ ಮಾಡ್ಕೊಂಡ್ಬಿಡಿ .
ನಾನು (ಒಳ್  ಒಳಗೇ ನಗುತ್ತಾ ) : ಯಾಕೆ ?
ಕಂಡಕ್ಟರ್:ಆದಷ್ಟು ಬೇಗ ಮದ್ವೆ ಮಾಡ್ಕೊಳದು ಒಳ್ಳೇದು ... ಇನ್ನ ಚಿಕ್ಕ ವಯಸ್ಸು ಅಲ್ವಾ ,,,ಲೇಟ್ ಆದ್ರೆ ಕಷ್ಟ . ಸುಮ್ನೆ ಹಾಗೆ ಹೇಳ್ದೆ ಅಷ್ಟೆ .
ನಾನು : ಓ .ಹೌದಾ ? ಆದ್ರೆ ನಂಗೆ ಮದ್ವೆ ಆಗಿದ್ಯಲ್ಲಾ .
ಕಂಡಕ್ಟರ್:ಅಯ್ಯಾ ಸುಮ್ನಿರಿ ಮೇಡಂ .ನಿಮ್ಗೆಲ್ಲಿ ಆಗಿದೆ !
ನಾನು :ಹಹ .ಹೋಗ್ಲಿ ಬಿಡಿ .ನಂಬೇಡಿ .ನಂಗೇನು .
ಕಂಡಕ್ಟರ್:ಕತ್ತಲ್ಲಿ ತಾಳಿನೇ ಇಲ್ಲ .ಅದು ಹೆಂಗೆ ಮೇಡಂ ?
ಪಕ್ಕದಲ್ಲಿ ಒಂದ್ ಲೇಡಿ :ಇವಾಗೆಲ್ಲ ಯಾರು ಹಾಕಲ್ಲ ಸರ್ .ಸ್ಟೈಲು .
(ಆ ಯಮ್ಮಂಗೆ  ಮನೇಲಿ ತುಂಬಾ ರೆಸ್ಟ್ರಿಕ್ಷನ್ಸ್ ಅನ್ಸುತ್ತೆ ಪಾಪ )
ಕಂಡಕ್ಟರ್ ನನ್ನ ನೋಡ್ತಾ :ಹಾಕೋಬೇಕು ಮೇಡಂ ... ತಾಳಿ ಸರ ಇದ್ರೇನೆ ಒಂದ್ ಲಕ್ಷಣ . ಪ್ರೊಟೆಕ್ಷನ್ ಥರ ನೋಡಿ . ಇಲ್ಲಾಂದ್ರೆ ಗಂಡಸ್ರು ಒಂಥರಾ ನೋಡ್ತಾರೆ . ಸುಮ್ನೆ ಯಾಕೆ ಅಲ್ವ ? ಹಾಕೊಂಡ್ಬಿಟ್ರೆ ,ಇವ್ಳಿಗೆ ಮದ್ವೆ ಆಗಿದೆ ಬಿಡಪ್ಪ ಅಂತ ಅನ್ಕೊಂಡ್ ಸುಮನಾಗ್ತಾರೆ . ಕೆಟ್ಟು ದೃಷ್ಟಿಯಿಂದ ನೋಡಲ್ಲ. ಅಲ್ವ ?
ಆ ಯಮ್ಮ : ಹೌದು ಸರ್ .ಇಲ್ಲಾಂದ್ರೆ ಹೆಂಗ್ ಗೊತ್ತಾಗುತ್ತೆ ಹೇಳಿ ?
ಕಂಡಕ್ಟರ್ ನನ್ನ ಕಾಲ್ ನೋಡ್ದ . ಕಾಲುಂಗ್ರ ಕಾಣಿಸ್ತು ಅನ್ಸತ್ತೆ .
ಕಂಡಕ್ಟರ್:ಓ ಪರವಾಗಿಲ್ಲ , ಕಾಲುಂಗ್ರ ಇದೆ .ಪ್ರೂಫ್ ಇದೆ ಬಿಡಿ.

ನಾನು : ಕತ್ತಲ್ಲಿ ತಾಳಿ , ಕಾಲಲ್ಲಿ ಉಂಗ್ರ ನೋಡ್ಕೊಂಡ್ ಹೆಣ್ಣ್ಮಕ್ಳನ್ನ ಜಡ್ಜ್ ಮಾಡೋರ್ ನನ್ ಪ್ರಾಕಾರ ಗಂಡಸರೇ ಅಲ್ಲ .

ಕಂಡಕ್ಟರ್ ಎದ್ಧೋದ  , ಆ ಯಮ್ಮ ಮೊಬೈಲ್ ನೋಡಕ್ ಶುರು ಮಾಡಿದ್ಲು .

Any more questions ? Bring it on !

[ ಮೈ ಮುಚ್ಚೋ ಚೂಡಿ ,ಜೀನ್ಸ್ ,ಟಿ ಶರ್ಟ್ ನ ಸೆಕ್ಸಿ ಡ್ರೆಸ್ ಅಂತಾರೆ ,,ಬೆನ್ನು ಹೊಟ್ಟೆ ,ಸೊಂಟ ಕಾಣಿಸೋ ಸೀರೆ ಲಕ್ಷಣ ಅಂತಾರೆ ..ತಾಳಿ ಹಾಕಿಲ್ಲ ಅಂದ್ರೆ ಮದ್ವೆ ಆಗಿಲ್ಲ ಅನ್ಕೋತಾರೆ ... ಅಯ್ಯೋ ರಾಮ .... ಇದೆಲ್ಲಾ ಹಾಗಿರ್ಲಿ . ಅನಾಲಿಟಿಕ್ಸ್  ಪ್ರಕಾರ ನಮ್ ದೇಶದಲ್ಲಿ ಬುರ್ಖಾ , ಸೀರೆ, ಸಲ್ವಾರ್ ಹಾಕೊಳೋರ್ ಮೇಲೇನೆ ಜಾಸ್ತಿ ರೇಪ್ ಆಗಿರೊದಂತೆ. ನೋಡೋರ್ ದೃಷ್ಟಿ , ಮನಸ್ಸು ಕಂಟ್ರೋಲಲ್ಲಿ ಇಲ್ಲಾಂದ್ರೆ ಹೆಣ್ಮಕ್ಳು ಬಟ್ಟೆ ಮೇಲೆ ಹಾಕ್ಬಿಡದು . ಗಂಡಸ್ರು ಚಿಕ್ಕ್ ಚಿಕ್ಕ್ ಚಡ್ಡಿ ಬರ್ಮೋಡಾ ಹಾಕೊಂಡಾಗ , ಹೆಣ್ಮಕ್ಳು ಅದೇ ದೃಷ್ಟಿಯಿಂದ ಏನಾದ್ರು ನೋಡಕ್ ಶುರು ಮಾಡಿದ್ರೆ  .. .. .. .. .. .. .. .. .. .. ಗೊಳ್ ಅಂತ ನಗ್ಬೇಡಿ .. ಯೋಚ್ನೆ ಮಾಡೋ ರೀತಿ ನ ಬದ್ಲಾಯಿಸಿ ! ]


It's not about the attire, it's the way you think .Damn it !

0 comments:

Post a Comment